ಸರ್ವಜ್ಞನ ತ್ರಿಪದಿಗಳು- ಆರೋಗ್ಯ
Main Article Content
Abstract
ಸದೃಢ ಆರೋಗ್ಯದಲ್ಲಿ ಸದೃಢ ಮನಸ್ಸು ನೆಲೆಸಿರುತ್ತದೆ ಎನ್ನುವ ಪ್ರಸಿದ್ಧ ಮಾತಿನಂತೆ ಎಲ್ಲ ಭಾಗ್ಯಗಳಿಗಿಂತಲೂ ರ‍್ವಶ್ರೇಷ್ಟ ಭಾಗ್ಯವೆಂದರೆ ಅದು ಆರೋಗ್ಯ ಭಾಗ್ಯ. ಪ್ರಾಚೀನ ಕಾಲದಿಂದಲೂ ಋಷಿಮುನಿಗಳು, ಕವಿಗಳು, ದರ‍್ಶನಿಕರು ಆರೋಗ್ಯದ ಬಗ್ಗೆ ಮಹತ್ವದ ವಿಚಾರಗಳು ಹೇಳುತ್ತಲೇ ಬಂದಿದ್ದಾರೆ. ನಮ್ಮ ನಾಡಿನ ಅಪರೂಪದ ಅನುಭಾವಿ ಮಹಾದರ‍್ಶನಿಕ ಸಂತಕವಿ ಎಂದೇ ಖ್ಯಾತನಾದ ರ‍್ವಜ್ಞನು ಕೂಡಾ ಆರೋಗ್ಯದ ಕುರಿತು ಜನಮನಕ್ಕೆ ಮುಟ್ಟವ ಹಾಗೆ ತನ್ನ ತ್ರಿಪದಿಗಳಲ್ಲಿ ರ‍್ಶಿಸಿದ್ದಾನೆ. . ಸಮಾಜ ಜೀವಿಯಾದ ರ‍್ವಜ್ಞನು ರ‍್ವ ಸಮಾಜವಿಜ್ಞಾನಿಯಾಗಿ ತನ್ನದೇ ಆದ ವಿಚಾರಗಳನ್ನು ಹೇಳಿದ್ದಾನೆ. ಸಮಾಜದ ಕುರಿತಾಗಿ ಅವನು ಹೇಳದೇ ಇರುವ ವಿಷಯಗಳೇ ಇಲ್ಲ “ಆಡು ಮುಟ್ಟಿದ ಸೊಪ್ಪಿಲ್ಲ, ಸರ್ವಜ್ಞ ಹೇಳೆದ ವಿಷಯವಿಲ್ಲ” ಎಂಬ ನಾಣ್ಣುಡಿಯಂತೆ ರ‍್ವಜ್ಞನು ವಿಶ್ವದ ವಿಷಯಗಳೆನ್ನೆಲ್ಲ ಕ್ರೂಢೀಕರಿಸಿ ಹೇಳುವ ಪ್ರಯತ್ನ ಮಾಡಿದ್ದಾನೆ. ‘ಸರ್ವಜ್ಞ' ಎಂಬ ಶಬ್ದವೇ ಸೂಚಿಸುವಂತೆ " ಅವನು ಎಲ್ಲ ಬಲ್ಲವನು. ರ‍್ವಜ್ಞನು ಹಿಂದೆ ಇರುವ ಪರಂಪರೆಯಂತೆ ಪಂಡಿತರನ್ನು ಮೆಚ್ಚಿಸಿ, ಮಹಾಕವಿ ಪಟ್ಟಗಿಟ್ಟಿಸಿಕೊಳ್ಳುವುದಕ್ಕಾಗಿ ಯಾವುದೇ ಮಹಾಕಾವ್ಯ ಬರೆಯಲಿಲ್ಲ. ತಾನು ಕಂಡದ್ದನ್ನು, ಕೇಳಿದ್ದುö್ನ, ಅನುಭವಿಸಿರುವುದನ್ನು ಅತ್ಯಂತ ಸರಳ ಛಂದೋಬದ್ಧವಾದ ಜನಪದ ಧಾಟಿಯ ತ್ರಿಪದಿಯಲ್ಲಿ, ಆಬಾಲ ವೃದ್ಧರಾದಿಯಾಗಿ ಎಲ್ಲರೂ ತಿಳಿದುಕೊಳ್ಳುವ ಹಾಗೆ ತನ್ನ ವಿಚಾರಗಳನ್ನು ಜನಮಾನಸಕ್ಕೆ ಮುಟ್ಟಿಸುಲ್ಲಿ ಯಶಸ್ವಿಯಾಗಿದ್ದಾನೆ. ಆತನೊಬ್ಬ ಜನಪರ ಕವಿ. ಅಲ್ಲದೆ ಆತನೊಬ್ಬ ಜನ ಸಮುದಾಯದ ವೈದ್ಯನಾಗಿ ಸುಖಿ ಆರೋಗ್ಯದ ಕುರಿತು ಹೇಳಿರುವ ಆತನ ವಿಚಾರಗಳು ಇಂದಿಗೂ ಪ್ರಸ್ತುತವಾಗಿವೆ. ಇಂದು ನಾವು ಸರಿಯಾಗಿ ಊಟವನ್ನು ಮಾಡದೇ ದೇಹಾರೋಗ್ಯವನ್ನೂ ಮನಶ್ಶಾಂತಿಯನ್ನೂ ಕಳೆದುಕೊಂಡು ವೈದ್ಯರ ಬಳಿಗೆ ಹೋಗುತ್ತೇವೆ, ಹೆಚ್ಚೆಚ್ಚು ಮಾತ್ರೆಗಳನ್ನು ನುಂಗುತ್ತೇವೆ. ನಾವು ಏನು ತಿನ್ನುತ್ತೇವೆ, ಹೇಗೆ ತಿನ್ನುತ್ತೇವೆ ಎಂಬುದರ ಮೇಲೆ ನಮ್ಮ ಆರೋಗ್ಯ ನಿಂತಿದೆ. ದೇಹಾರೋಗ್ಯವನ್ನು ಬಹುಪಾಲು ನಿಯಂತ್ರಿಸುವ ಕುರಿತು, ಆಹಾರ ಮತ್ತು ಆರೋಗ್ಯದ ವಿಷಯಗಳನ್ನು ತುಂಬ ಸೊಗಸಾಗಿ ಸರ್ವಜ್ಞ ಕವಿ ಹಲವು ತ್ರಿಪದಿಗಳಲ್ಲಿ ಸಾದರಪಡಿಸಿದ್ದಾನೆ.