ಕನ್ನಡ ಶಾಸನಗಳಲ್ಲಿ ಲಲಿತ ಕಲೆಗಳು
Main Article Content
Abstract
ಪ್ರಾಚೀನ ಕಾಲದಿಂದಲೂ ಭಾರತೀಯರು ಅನೇಕ ಕಲೆಗಳನ್ನು ತಮ್ಮ ಜೀವನದ ಅವಿಭಾಜ್ಯವಾಗಿಸಿಕೊಂಡು ಅನೇಕ ಕಲಾಪ್ರಿಯರು, ಅನಾದಿ ಕಾಲದಿಂದಲೂ ಲಲಿತ ಕಲೆಗಳನ್ನು ಪೋಷಿಸಿಕೊಂಡು ಬಂದಿದ್ದಾರೆ. ಅದು ಶಿಲ್ಪಕಲೆ, ಸಂಗೀತ ಕಲೆ, ನೃತ್ಯ ಕಲೆ, ಕಾಷ್ಠಕಲೆ, ಬರಹ ಕಲೆ, ಯುದ್ಧಕಪರಂಪರೆಯಲ್ಲಿ ಹಿಂದಿನಿAದಲೂ ಆಸ್ತಿತ್ವದಲ್ಲಿದ್ದುದ್ದನ್ನು ಕಾಣಬಹುದು. ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಯಾವುದಾದರೊಂದು ಒಂದು ಕಲೆ ಅವನಲ್ಲಿ ಸೂಪ್ತವಾಗಿರುತ್ತದೆ. ಆ ಕಲೆಯನ್ನು ಗುರುತಿಸಲು ಒಬ್ಬ ಸರಿಯಾದ ವ್ಯಕ್ತಿ ಬೇಕು ಅಷ್ಟೆ. ಮಾನವನ ನಾಗರಿಕತೆ ಸಂಸ್ಕೃತಿ ಇತ್ಯಾದಿ ಎಲ್ಲ ವರ್ತನೆ ಮತ್ತು ಅಭಿವ್ಯಕ್ತಿಗಳಿಗೆ ಈ ಕಲೆಗಳು ಮಾಧ್ಯಮವಾಗಿವೆ. “ಕಲೆಗಳು ಒಂದೇ ಉದ್ದೇಶವಾದ ಧರ್ಮದ ಮಾರ್ಗವನ್ನು ಸೂಚಿಸಲು ಮತ್ತು ಧರ್ಮವನ್ನು ಎತ್ತಿ ಹಿಡಿಯುವುದನ್ನು ಆಧರಿಸಿದ್ದರೂ ತಮ್ಮ ಭಿನ್ನ ಮಾಧ್ಯಮಗಳಿಂದ, ರೀತಿಗಳಿಂದ ತಮ್ಮದೇ ಆದ ವಿಭಿನ್ನ ರೀತಿಯ ಅಭಿವ್ಯಕ್ತತೆಯನ್ನು ಪಡೆದಿವೆ.” (ಕರ್ನಾಟಕ ಸಂಗಾತಿ; ಸಂ: ಬರಗೂರು ರಾಮಚಂದ್ರಪ್ಪ,À ಪ್ರ. ಕನ್ನಡ ಅಭಿವೃದ್ಧಿ ಪ್ರಾಧಿಕಾರ,ಬೆಂಗಳೂರು.೨೦೦೨,ಪು.೪೨೮)