ಶಾಸನ ಕ್ಷೇತ್ರಕ್ಕೆ ಜೆ.ಎಫ್.ಫ್ಲೀಟ್ ಅವರ ಕೊಡುಗೆ
Main Article Content
Abstract
ಭಾರತವು ಸ್ವಾತಂತ್ರ‍್ಯ ಪಡೆಯುವುದಕ್ಕೆ ಮುಂಚೆ ಕನ್ನಡ ಮಾತನಾಡುವ ಜನ ಮತ್ತು ನಾಡು ಪ್ರಮುಖವಾಗಿ ನಾಲ್ಕು ಪ್ರದೇಶಗಳಲ್ಲಿ ಹರಿದು ಹಂಚಿ ಹೋಗಿದ್ದವು. ಅರಸರ ಆಡಳಿತದ ಹಳೇ ಮೈಸೂರು ರಾಜ್ಯ ಇಂಗ್ಲಿಷರ ನೇರ ಆಳಿಕೆಯಲ್ಲಿ ಮುಂಬಯಿ ರ‍್ನಾಟಕ ಮತ್ತು ಮದ್ರಾಸು ಪ್ರಾಂತ್ಯ ಹಾಗೂ ಹೈದ್ರಾಬಾದ್ ನವಾಬನ ಆಡಳಿತದಲ್ಲಿನ ಪ್ರದೇಶ ಪ್ರತ್ಯೇಕವಾಗಿಯೇ ಇದ್ದವು. ಅಲ್ಲದೆ ಸೊಂಡೂರು, ಜಮಖಂಡಿ, ಸವಣೂರು, ಜತ್ತ ಮೊದಲಾದ ಚಿಕ್ಕ ಪುಟ್ಟ ಸಂಸ್ಥಾನಗಳೂ ಇದ್ದವು. ಬೆಳಗಾವಿ,ಬಿಜಾಪುರ,ಧಾರವಾಡ,ಉತ್ತರ ಕನ್ನಡ ಜಿಲ್ಲೆಗಳು ಮುಂಬಯಿ ಪ್ರಾಂತ್ಯದಲ್ಲಿ, ಬಳ್ಳಾರಿ, ದಕ್ಷಿಣ ಕನ್ನಡ ಕೊಡಗು ಜಿಲ್ಲೆಗಳು ಮದ್ರಾಸು ಪ್ರಾಂತ್ಯದಲ್ಲಿ ಆಂಗ್ಲರ ನೇರ ಆಡಳಿತಕ್ಕೊಳ ಪಟ್ಟಿದ್ದವು. ಅಖಂಡ ರ‍್ನಾಟಕದ ಉಳಿದ ಭಾಗಗಳು ಮೈಸೂರಸರ ಆಳ್ವಿಕೆಗೆ ಒಳ ಪಟ್ಟು ಬ್ರಿಟಿಷರ ಮೇಲುಸ್ತುವಾರಿಯಲ್ಲಿದ್ದವು. ಈ ಎಲ್ಲ ಪ್ರದೇಶಗಳಲ್ಲೂ ಆಡಳಿತದ ಉನ್ನತ ಅಧಿಕಾರವು ಬ್ರಿಟಿಷರಿಗೆ ಮೀಸಲು. ಅದಕ್ಕಾಗಿಯೇ ಇಂಡಿಯನ್ ಸಿವಿಲ್ ರ‍್ವೀಸ್ ಸೇವೆ ಇದ್ದಿತು. ಆ ತರಬೇತಿಯ ವಿಶೇಷವೆಂದರೆ ಭಾರತಕ್ಕೆ ಬರುವ ಅಧಿಕಾರಿಗಳು ಭಾರತೀಯ ಭಾಷೆ ತಿಳಿದಿರುವುದು ಕಡ್ಡಾಯವಾಗಿತ್ತು.