ಕನ್ನಡ ಶಾಸನಗಳಲ್ಲಿ ಮಹಿಳೆಯರ ಸ್ಥಾನ-ಮಾನ

Main Article Content

ಡಾ.ರಾಜಕುಮಾರ

Abstract

            ಒಂದು ಕುಟುಂಬದ ಬೆಳವಣಿಗೆಯಲ್ಲಿ ಪುರುಷರಷ್ಟೇ ಸ್ತ್ರೀಯರ ಪಾತ್ರ ಪ್ರಾಮುಖ್ಯತೆ ಪಡೆದುಕೊಂಡಿದೆ. ಹಾಗೆಯೇ ಒಂದು ನಾಡು, ರಾಷ್ಟ್ರ ಪ್ರಗತಿಹೊಂದಬೇಕಾದರೆ ಅಲ್ಲಿ ಮಹಿಳೆಯರ ಪಾತ್ರ ಅತೀ ಮುಖ್ಯವಾಗಿರುತ್ತದೆ. ಪ್ರಾಚೀನ ಕಾಲದಲ್ಲಿಯೂ ಮಹಿಳೆಯರಿಗೆ ಇದ್ದ ಸ್ಥಾನಮಾನಗಳ ಬಗ್ಗೆ ಶಾಸನಗಳು ಉಲ್ಲೇಖಿಸುತ್ತವೆ. ಉದಾಹರಣೆಗೆ ನೋಡುವುದಾದರೆ ಶಾತವಾಹನರ ರಾಣಿಯರು ಸ್ವತಃ ಶಾಸನಗಳನ್ನು ಹಾಕಿಸಿದರೆನ್ನಲಾಗಿದೆ. ಅದರಲ್ಲಿ ಅವರು ನೀಡಿದ ದಾನದತ್ತಿಗಳು ಮತ್ತು ಅವರು ನರ‍್ಮಿಸಿದ ಚೈತ್ಯಾಲಯಗಳು, ವಿಹಾರ ಹಾಗೂ ಶಿಲಾಮರ‍್ತಿಗಳ ರಚನೆಗಳ ಕುರಿತಾಗಿ ಮತ್ತು ಬೌದ್ಧ ಸಂಘಗಳಿಗೆ ಅವರು ನೀಡಿದ ದಾನದ ವಿವರಗಳು ಮುಖ್ಯವಾಗುತ್ತವೆ. ಶಾತವಾಹನರ ರಾಣಿ ಗೌತಮಿ, ಬಾಲಶ್ರೀ ಬನವಾಸಿಯ ಚುಟುಕುಲಾನಂದ ರಾಜಕುಮಾರಿ ಶಿವಸ್ಕಂದ ನಾಗಾಶ್ರೀ ಅಲ್ಲದೇ ಇಕ್ಷಾಕು ಮನೆತನದ ರಾಣಿಯರು ನಾಗರ‍್ಜುನ ಕೊಂಡದಲ್ಲಿ ಹಲವಾರು ಕಟ್ಟಡಗಳನ್ನು ನರ‍್ಮಿಸಿದರೆಂದು ತಿಳಿದುಬರುತ್ತದೆ.

Article Details

Issue
Section
Articles