ಸರ್ವಜ್ಞ ಮತ್ತು ಜಾತಿ ವ್ಯವಸ್ಥೆ

Main Article Content

ಡಾ.ರಾಜಕುಮಾರ

Abstract

ಮನುಷ್ಯ ತನ್ನ ಸ್ವಾರ್ಥ ಬದುಕಿಗಾಗಿ ಎನೆಲ್ಲಾ ನಿರ್ಮಿಸಿಕೊಂಡಂತೆ ಜಾತಿಯು ನಿರ್ಮಿಸಿಕೊಂಡಿದ್ದಾನೆ. ಜಾತಿ ಎಂಬ ವಿಷ ಬೀಜ ಬಿತ್ತಿ ಮನಸ್ಸುಗಳು ಒಡೆದು; ಈ ಜಾತಿ ಎಂಬ ಪೆಡಂಭೂತ ಇಂದಿಗೂ ಬೇತಾಳನಂತೆ ಯಾರನ್ನೂ ಬಿಡದೇ ಬೆನ್ನು ಹತ್ತಿದೆ. ಈ ಜಾತಿಯನ್ನು ಹೋಗಲಾಡಿಸಿ, ಮಾನವರ ಮನಸ್ಸು ಒಗ್ಗೂಡಿಸಲಿಕ್ಕೆ ಅನೇಕ ದಾರ್ಶನಿಕರು ಕವಿಗಳು ಶರಣರು ಸಂತರು ಶ್ರಮಿಸಿದ್ದಾರೆ; ಶ್ರಮಿಸುತ್ತಿದ್ದಾರೆ. ‘ಜಾತಿ’ ಎಂಬುವುದು ಇಂದು ಸಮಾಜದಲ್ಲಿ ಬಹು ಆಳಕ್ಕೆ ಇಳಿದ  ಮಹಾ ಅಂಟು ರೋಗವಾಗಿದೆ.


         ಮನುಷ್ಯ ತನ್ನ ಬದುಕು ಕಟ್ಟಿಕೊಳ್ಳಲಿಕ್ಕೆ ಯಾವುದೊ ಒಂದು ಕಾಯಕ ಕೈಕೊಳ್ಳುತ್ತಾನೆ.ಅದು ಆತನಿಗೆ ಅನಿವಾರ್ಯವೂ ಹೌದು.ಆತನು ಕೈಕೊಂಡ ಕೆಲಸ ನಾಲ್ಕು ಜನರಿಗೆ ಸಹಾಯವೂ ಆಗುತ್ತದೆ.ಆದರೆ ಅದನ್ನೆ ಮುಂದು ಮಾಡಿಕೊಂಡು ಆತನನ್ನು ಇನ್ನೊಬ್ಬರಿಂದ ಪ್ರತ್ಯೇಕಿಸುವ ಧೋರಣೆ ಮಾತ್ರ ವಿಚಿತ್ರವಾಗಿದೆ. ಆತನಿಂದ ತಯ್ಯಾರಿಸ್ಪಡುವ ವಸ್ತುಗಳು ಎಲ್ಲರಿಗೂ ಬೇಕು ಆದರೆ ಆತ ಮಾತ್ರ ಬೇಡ.  ಇದೇ ಆತನ ಒಡೆದಾಳುವ ನೀತಿಯ ಮೂಲ ರಹಸ್ಯ. ಅದಕ್ಕಾಗಿಯೇ ಕನ್ನಡದ ಆದಿಕವಿ ಪಂಪ "ಮನುಷ್ಯ ಜಾತಿ ತಾನೊಂದೆ ವಲಂ " ಎಂದು ಹತ್ತನೇ ಶತಮಾನದಲ್ಲಿಯೇ ಬೋಧಿಸುತ್ತಾನೆ ನಾವು ಮಾಡುವ ಯಾವುದೇ ಕೆಲಸ ಕೀಳಲ್ಲ ಶ್ರೇಷ್ಠವೂ ಅಲ್ಲ ಅವನು ಮಾಡುವ ವೃತ್ತಿಯಿಂದ ಜಾತಿ  ವಿಭಾಗಿಸಲಾಗದು ಇಲ್ಲಿ ಎಲ್ಲ ವೃತ್ತಿಗಳು ಸಮಾನವೇ ಆಗಿವೆ. ಹಾಗಾಗಿ ಪಂಪನು ಒಬ್ಬ ವ್ಯಕ್ತಿ ಬೇರೆ ಬೇರೆ ವೃತ್ತಿಗಳನ್ನು ಕೈಗೊಂಡರೂ ‘ಮನುಷ್ಯ ಕುಲ ಒಂದೇ’ ಎಂದು ಸಾರುತ್ತಾನೆ

Article Details

Issue
Section
Articles